Bengaluru Namma Metro: 2023ರಲ್ಲಿ ನಮ್ಮ ಮೆಟ್ರೋ ಇನ್ನಷ್ಟು ವಿಸ್ತರಣೆ! ಈ ಮಾರ್ಗದ ಜನತೆಗೆ ಗುಡ್ ನ್ಯೂಸ್
ಉದ್ದದ ಈ ಕಾರಿಡಾರ್ 16 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ನೀಡಲಿದೆ. ಈ ಭಾಗದ ನಾಗರಿಕರು ನಮ್ಮ ಮೆಟ್ರೋ ಸೇವೆಯನ್ನು ಬಳಸಿಕೊಂಡು ತಮ್ಮ ಪ್ರಯಾಣ ಮಾಡಬಹುದಾಗಿದೆ.
ಬೆಂಗಳೂರು ನಮ್ಮ ಮೆಟ್ರೋ ಲಕ್ಷಾಂತರ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇದೇ ವರ್ಷ ನಮ್ಮ ಮೆಟ್ರೋ ಇನ್ನಷ್ಟು ವಿಸ್ತರಣೆ ಆಗಲಿದೆ. ಈ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ
ಬೆಂಗಳೂರು ನಮ್ಮ ಮೆಟ್ರೋ 2023ರಲ್ಲಿ 30.09 ಕಿಲೋ ಮೀಟರ್ ವಿಸ್ತರಣೆ ಆಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಈ ವಿಸ್ತರಣೆ ಪ್ರಮುಖ ಪಾತ್ರ ವಹಿಸಲಿದೆ. (ಸಾಂದರ್ಭಿಕ ಚಿತ್ರ)
ನಮ್ಮ ಮೆಟ್ರೋದಲ್ಲಿ ಈ ವರ್ಷ 3 ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿವೆ.ಅಲ್ಲದೇ ವೈಟ್ಫೀಲ್ಡ್ ಮಾರ್ಗ ಮಾರ್ಚ್ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಬಣ್ಣಗಳ ಮಾರ್ಗಗಳಲ್ಲಿ ಪ್ರಸ್ತುತ 56 ಕಿಲೋ ಮೀಟರ್ ಮಾರ್ಗದಲ್ಲಿ ಸೇವೆ ಒದಗಿಸುತ್ತಿದೆ. (ಸಾಂದರ್ಭಿಕ ಚಿತ್ರ)
ಈ ಮಾರ್ಗಕ್ಕೆ ಈ ವರ್ಷ ಅಂದರೆ 2023ರಲ್ಲೇ ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್ಗೂ ನಮ್ಮ ಮೆಟ್ರೋ ಸೇವೆ ಆರಂಭವಾಗಲಿದೆ. ಹೀಗಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)
ಅಲ್ಲದೇ, ಆರಂಭವಾಗಲಿರುವ ಹಳದಿ ಮಾರ್ಗದ ಮೆಟ್ರೋದಲ್ಲಿ ಆರ್ ವಿ ಮಾರ್ಗ-ಬೊಮ್ಮಸಂದ್ರ ಕಾಮಗಾರಿ ಇನ್ನೇನು ಮುಗಿಯಲಿದೆ. (ಸಾಂದರ್ಭಿಕ ಚಿತ್ರ)
18.82 ಉದ್ದದ ಈ ಕಾರಿಡಾರ್ 16 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ನೀಡಲಿದೆ. ಈ ಭಾಗದ ನಾಗರಿಕರು ನಮ್ಮ ಮೆಟ್ರೋ ಸೇವೆಯನ್ನು ಬಳಸಿಕೊಂಡು ತಮ್ಮ ಪ್ರಯಾಣ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
ಒಟ್ಟಾರೆ ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ವಿಸ್ತರಣೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)