ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

0 442

2023ರ ಎಲೆಕ್ಷನ್​​ ಗೆಲ್ಲಲು ವಾರ್​ ರೂಮ್​ನಲ್ಲಿ ಕಾಂಗ್ರೆಸ್​​​ ಪಡೆ ಮೂರು ಗಂಟೆಗಳ ಕಾಲ ಸಮರಾಭ್ಯಾಸ ನಡೆಸಿದೆ. 224 ಕ್ಷೇತ್ರಗಳ ಪಕ್ಷದ ಸೇನಾನಿಗಳ ಆಯ್ಕೆಗಾಗಿ ಕಸರತ್ತು ನಡೆಸಿರುವ ಕೈಸೇನೆ, 137 ಕ್ಷೇತ್ರಕ್ಕೆ ಮೊದಲ ಪಟ್ಟಿ ರಿಲೀಸ್​​ ಮಾಡಲು ಮಹತ್ವದ ಸಭೆ ನಡೆಸಿದೆ. ಈ ಮಧ್ಯೆ ಮೂವರು ಹಾಲಿ ಶಾಸಕರಿಗೆ ಟಿಕೆಟ್​​ ಡೌಟ್​ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಸಿಕ್ಕಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​​ ಸರ್ವ ಸನ್ನದ್ಧವಾಗ್ತಿದೆ. 224 ಕ್ಷೇತ್ರಗಳಲ್ಲಿ ತನ್ನ ರಣಕಲಿಗಳ ಆಯ್ಕೆ ಕಸರತ್ತು ಆರಂಭಿಸಿದೆ. ಬೆಂಗಳೂರು ಹೊರವಲಯದ ಖಾಸಗಿ ಹೊಟೇಲ್​ನಲ್ಲಿ ಹೈವೋಲ್ಟೇಜ್​ ಮೀಟಿಂಗ್​ ಆಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆ 3 ಗಂಟೆಗಳ ಕಾಲ ಪ್ರತ್ಯೇಕ ಸಭೆ ನಡೆಸಿದ್ದಾರೆ.

224 ಕ್ಷೇತ್ರಗಳ ಪಕ್ಷದ ಸೇನಾನಿಗಳ ಆಯ್ಕೆಗಾಗಿ ಕಸರತ್ತು!
ಬೆಂಗಳೂರು ಹೊರ ವಲಯದಲ್ಲಿ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ ಟಿಕೆಟ್​ ಆಕಾಂಕ್ಷಿಗಳ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚೆ ನಂತ್ರ 15 ದಿನಗಳಲ್ಲಿ ಮೊದಲ ಪಟ್ಟಿ ರಿಲೀಸ್​​ ನಿರೀಕ್ಷೆ ಇದೆ. ಪಕ್ಷದ ಟಿಕೆಟ್‌ಗಾಗಿ 1,230 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.. ಶಾರ್ಟ್ ಲಿಸ್ಟ್​ ವೇಳೆ, ಕೆಲವು ಹೆಸರು ಕೈಬಿಡಲಾಗಿದೆ.

ಕೈಪಡೆ ವಾರ್​ರೂಮ್​ ಮೀಟಿಂಗ್​​!
ಪಕ್ಷದ ಹಾಲಿ ಶಾಸಕರು, ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತ ಅಭ್ಯರ್ಥಿಗಳ ಹೆಸರುಗಳನ್ನ ಶಾರ್ಟ್​​ಲಿಸ್ಟ್​​ ಮಾಡಲಾಗಿದೆ. ಅಲ್ಲದೆ, ಸಮೀಕ್ಷೆ ಆಧಾರಿತವಾಗಿ ಕೆಲವು ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಇನ್ನು, ಕೆಲವು ಕ್ಷೇತ್ರಗಳಲ್ಲಿ 20 ರಿಂದ 30 ಮಂದಿ ಆಕಾಂಕ್ಷಿಗಳು ಪಕ್ಷದ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಪ್ರಮುಖ ಹೆಸರುಗಳನ್ನ ಮಾತ್ರ ಈ ಲಿಸ್ಟ್​ನಲ್ಲಿ ಸೇರಿಸಿಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ. ಮೊದಲ ಪಟ್ಟಿ ರಿಲೀಸ್​​ಗಾಗಿ ಒಟ್ಟು 137 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲು ಸಭೆಯಲ್ಲಿ ಕಸರತ್ತು ನಡೆದಿದೆ.

ಇನ್ನು, ಸಭೆಯಲ್ಲಿ ಆದಷ್ಟು ಬೇಗ ಅಭ್ಯರ್ಥಿಗಳ ಹೆಸರು ಘೋಷಿಸುವಂತೆ ಒತ್ತಾಯ ಕೇಳಿ ಬಂದಿದೆ. ಅಭ್ಯರ್ಥಿ ಘೋಷಣೆಯಾದ್ರೆ, ಚುನಾವಣೆಯಲ್ಲಿ ಕ್ಷೇತ್ರದ ಪ್ರಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೆ, ಎದುರಾಳಿ ಪಕ್ಷಗಳ ವಿರುದ್ಧ ಕಾರ್ಯತಂತ್ರ ರೂಪಿಸಲು ಉಪಯೋಗ ಆಗಲಿದೆ. ಇನ್ನು, ಕ್ಷೇತ್ರದ ಮತದಾರರನ್ನ ಸಾಧ್ಯವಾದಷ್ಟು ಬೇಗ ಮುಟ್ಟಬಹುದು ಅನ್ನೋ ಸಲಹೆ ವ್ಯಕ್ತವಾಗಿವೆ.

ಈ ಮಧ್ಯೆ, ನ್ಯೂಸ್​ಫಸ್ಟ್​ಗೆ ಸಿಕ್ಕ ಮಾಹಿತಿ ಪ್ರಕಾರ ಮೂರು ಹಾಲಿ ಶಾಸಕರಿಗೆ ಟಿಕೆಟ್​​ ಡೌಟ್​ ಅಂತ ಹೇಳಲಾಗ್ತಿದೆ. ಅಷ್ಟಕ್ಕೂ ಕಾಂಗ್ರೆಸ್​ನ ಆ ಮೂವರು ಹಾಲಿ ಶಾಸಕರು ಯಾರು ಅನ್ನೋದನ್ನ ನೊಡೋದಾದ್ರೆ,

ಮೂವರಿಗೆ ಟಿಕೆಟ್​ ಮಿಸ್​?
ಅಫ್ಜಲ್​ಪುರ ಕ್ಷೇತ್ರ ಶಾಸಕ ಎಂ.ವೈ ಪಾಟೀಲ್​​​ಗೆ ವಯಸ್ಸಿನ ಕಾರಣ ಟಿಕೆಟ್​​ ನೀಡೋದು ಡೌಟ್​ ಎಂದು ತಿಳಿದುಬಂದಿದೆ. ಪಾವಗಡ ಕ್ಷೇತ್ರದ ಶಾಸಕ ವೆಂಕಟರಮಣಪ್ಪಗೂ ವಯಸ್ಸಿನ ಮಾನದಂಡವೇ ದುಬಾರಿ ಆಗುವ ಸಾಧ್ಯತೆ ಇದೆ. ಆದ್ರೆ, ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿ ವಿರುದ್ಧ ಕ್ಷೇತ್ರದಲ್ಲಿನ ವಿರೋಧಿ ಅಲೆ ಕಾರಣಕ್ಕೆ ಟಿಕೆಟ್​ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ಟಾರೆ, ಈಗಾಗಲೇ ಜೆಡಿಎಸ್​​ ತನ್ನ ಮೊದಲ ಪಟ್ಟಿ ರಿಲೀಸ್​ ಮಾಡಿದ ಹೆಚ್​​ಡಿಕೆ ಪಂಚರತ್ನ ಯಾತ್ರೆ ಮೂಲಕ ಒಂದು ರೌಂಡ್​ ಪ್ರಚಾರದ ಕಹಳೆ ಮೊಳಗಿಸಿ ಬಂದಿದ್ದಾರೆ. ಆದ್ರೆ, ಟಿಕೆಟ್​ ವಿಚಾರದಲ್ಲಿ ಲೇಟ್​ ಲತೀಫ್​ ಎಂಬ ಅಪಖ್ಯಾತಿ ಹೊಂದಿದ್ದ ಕಾಂಗ್ರೆಸ್​​ ಕೂಡ ಇದೇ ಮೊದಲ ಬಾರಿಗೆ ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಸೇನಾನಿಗಳ ಹೆಸರನ್ನ ಅಂತಿಮಗೊಳಿಸ್ತಿದೆ. ಜೊತೆಗೆ ಬಂಡಾಯದ ಮೊಳಕೆಯೊಡೆಯುವ ಭೀತಿಯೂ ಕಾಡ್ತಿದೆ.

Leave A Reply

Your email address will not be published.

This site uses Akismet to reduce spam. Learn how your comment data is processed.

ಬಬಲೇಶ್ವರ ತಾಲೂಕು ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ     |     ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ ಮಾಡಿ ಹಿತನುಡಿಗಳುನ್ನು ಹೇಳಿದರು     |     ತೇರದಾಳ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಟ್ಟ ಆಮ್ ಆದ್ಮಿ ಪಕ್ಷ     |     ಮಾನವೀಯತೆ ಮೆರೆದ ಎಸ್‌ಡಿಪಿಐ ಸದಸ್ಯರು     |     ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.     |     ಪ್ರಿಯಕರನೊಂದಿಗೆ ಜಗಳ; ಮನನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ     |     ಅಮೆರಿಕ ನಡುಗಿಸಿದ ‘ಸ್ಪೈ ಬಲೂನ್’; ಚೀನಾದ ಕುತಂತ್ರಿ ಈ ಬಲೂನ್ ಎಷ್ಟು ದೊಡ್ದದಿದೆ ಗೊತ್ತಾ..?     |     Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?     |     ಟಾಟಾ ಗೆ ಭಾರೀ ಟಕ್ಕರ್ ! ಫೆಬ್ರವರಿ 10 ರಂದು Mahindra ಕಂಪನಿಯ 5 ಎಲೆಕ್ಟ್ರಿಕ್ ಕಾರುಗಳು ಅನಾವರಣ!     |     ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ     |    

पत्रकार बंधु भारत के किसी भी क्षेत्र से जुड़ने के लिए सम्पर्क करें