ಟಾಟಾ ಗೆ ಭಾರೀ ಟಕ್ಕರ್ ! ಫೆಬ್ರವರಿ 10 ರಂದು Mahindra ಕಂಪನಿಯ 5 ಎಲೆಕ್ಟ್ರಿಕ್ ಕಾರುಗಳು ಅನಾವರಣ!
Mahindra Upcoming Electric SUVs: UKಯ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಮಹೀಂದ್ರಾದ ಎಂಎಡಿಇ ವಿನ್ಯಾಸ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುವುದು.
Mahindra Upcoming Electric SUVs : ಮಹೀಂದ್ರಾ ಕಳೆದ ವರ್ಷ ಆಗಸ್ಟ್‌ನಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ನ್ಯೂ ಬಾರ್ನ್ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಪ್ರದರ್ಶಿಸಿತು. XUV.e ಮತ್ತು BE ಸಬ್ ಬ್ರಾಂಡ್‌ಗಳ ಅಡಿಯಲ್ಲಿ ಕಂಪನಿಯು 5 ಹೊಸ ಎಲೆಕ್ಟ್ರಿಕ್ SUVಗಳನ್ನು ಪ್ರದರ್ಶಿಸಿದೆ. UKಯ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಮಹೀಂದ್ರಾದ ಎಂಎಡಿಇ ವಿನ್ಯಾಸ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುವುದು. ಇವುಗಳಲ್ಲಿ XUV.e8, XUV.e9, BE.05, BE.07 ಮತ್ತು BE.09 ಮಾದರಿಗಳು ಸೇರಿವೆ.
ಇದು XUV700 ಗಿಂತ ಸುಮಾರು 45 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 5 ಎಂಎಂ ಎತ್ತರವಾಗಿರುತ್ತದೆ . ಅದರ ವೀಲ್‌ಬೇಸ್ 7 ಎಂಎಂ ನಷ್ಟು ಅಧಿಕಾವಗಿರುತ್ತದೆ. ಮಹೀಂದ್ರಾ XUV.e9 ಕೂಪ್ ತರಹದ ವಿನ್ಯಾಸದೊಂದಿಗೆ ಬರಲಿದೆ. ಇದನ್ನು ಏಪ್ರಿಲ್ 2025 ರ ವೇಳೆಗೆ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಇದು 4790 ಎಂಎಂ ಉದ್ದ, 1905 ಎಂಎಂ ಅಗಲ ಮತ್ತು 1690 ಎಂಎಂ ಎತ್ತರ ಇರಲಿದೆ. ಇದು 5-ಸೀಟರ್ ಮಾಡೆಲ್ ಆಗಿರುತ್ತದೆ ಮತ್ತು 2775mm ಉದ್ದದ ವೀಲ್‌ಬೇಸ್‌ನೊಂದಿಗೆ ಬರಲಿದೆ.