ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಚೀನಾಕ್ಕೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಚೀನಾ ಸ್ಪೈ ಬಲೂನ್ ಕಾಣಿಸಿಕೊಂಡಿದೆ. ಸದ್ಯ ಅಮೆರಿಕ ರಕ್ಷಣಾ ಇಲಾಖೆಯು ಚೀನಾದ ಸ್ಪೈ ಬಲೂನ್ನನ್ನು ಟ್ರ್ಯಾಕ್ ಮಾಡುತ್ತಿದೆ ಎಂದು ವರದಿಯಾಗಿದೆ.
ಬಲೂನ್ ಪತ್ತೆಯಾಗ್ತಿದ್ದಂತೆಯೇ ಅದರ ಸೂಕ್ಷ್ಮತೆಯನ್ನು ತಿಳದುಕೊಳ್ಳಲು ಅಮೆರಿಕ ಪ್ರಯತ್ನಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮಾಹಿತಿ ನೀಡಲಾಗಿದೆ. ದೇಶದ ನಾಗರಿಕರಿಗೆ ಅಪಾಯವಾಗದಂತೆ ಬಲೂನ್ ಹೊಡೆದುರುಳಿಸುವಂತೆ ರಕ್ಷಣಾ ಇಲಾಖೆಗೆ ಆದೇಶ ನೀಡಿದ್ದಾರೆ.
ಇನ್ನು ಸ್ಪೈ ಬಲೂನ್ ಕಮರ್ಷಿಯಲ್ ಏರ್ಸ್ಪೇಸ್ಗಿಂತ ಎತ್ತರದಲ್ಲಿದೆ. ಹೀಗಾಗಿ ಜನರಲ್ಲಿ ಯಾವುದೇ ಆತಂಕವನ್ನುಂಟು ಮಾಡಿಲ್ಲ ಎಂದು ವರದಿಯಾಗಿದೆ. ಈ ಬಲೂನ್ ಮೂಲಕ ಚೀನಾ ಅಮೆರಿಕದ ಕೆಲವು ಗುಪ್ತ ಮಾಹಿತಿಗಳನ್ನು ಕದಿಯಲು ಮುಂದಾಗಿದೆ ಎಂದು ನಂಬಲಾಗಿದೆ.