ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಜಯಶ್ರೀ ಕೊಟ್ಟ ಕೌಂಟರ್‌ ದೂರಿನಲ್ಲಿದ್ಯಾ ಅಸಲಿ ಸತ್ಯ?

179

Raichuru: ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಜಯಶ್ರೀ ಕೊಟ್ಟ ಕೌಂಟರ್‌ ದೂರಿನಲ್ಲಿದ್ಯಾ ಅಸಲಿ ಸತ್ಯ?
ರಾಯಚೂರು ಮಹಿಳಾ‌ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್​ಸ್ಟೇಬಲ್ ಜಯಶ್ರೀ ಯರಗಲ್ ದೂರು ನೀಡಿದ್ದು, ಪಿಎಸ್​ಐ ವಿರೇಶ್​ಗೆ ಈಗ ಬಂಧನದ ಭೀತಿ ಶುರುವಾಗಿದೆ.

ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ

ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಶ್ರೀ, ಯಾದಗಿರಿಯಲ್ಲಿ ಇಂಟಲಿಜೆನ್ಸ್ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಶ್​​​ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಕೊಪ್ಪಳದಲ್ಲಿ ಅತ್ಯಾಚಾರ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಅಲ್ಲದೇ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮತ್ತು ಅಪಹರಣ ಹಿನ್ನೆಲೆ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಬಲತ್ಕಾರ, ಅಪಹರಣ ಮತ್ತು ಜಾತಿನಿಂದನೆ SC/ST ಅಟ್ರಾಸಿಟಿ ಕಾಯ್ದೆಯಡಿ ಪಿಎಸ್​ಐ ವೀರೇಶ್​​ ವಿರುದ್ಧ ಕೇಸ್​ ದಾಖಲಾಗಿದ್ದು, ಈ ಹಿನ್ನೆಲೆ ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ ಎದುರಾಗಿದೆ.

ಈ ಮೊದಲು ಪಿಎಸ್​ಐ ವೀರೇಶ್​ ಲೇಡಿ ಕಾನ್ಸ್​ಟೇಬಲ್​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು. ಎಂಟು ವರ್ಷಗಳ ಕಾಲ ಜೊತೆಗಿದ್ದು, ಇದೀಗ ಬೇರೊಬ್ಬನೊಂದಿಗೆ ಮದುವೆ ಆಗಲು ರೆಡಿಯಾಗಿದ್ದಾರೆ. 35 ಲಕ್ಷ ರೂಪಾಯಿ ಪಡೆದು ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾರೆ ಎಂದು ಪಿಎಸ್​ಐ ವೀರೇಶ್​ ಆರೋಪಿಸಿದ್ದರು.

ಪಿಎಸ್​​ಐ – ಲೇಡಿ ಕಾನ್​ಸ್ಟೇಬಲ್​ ಲವ್​ ಸ್ಟೋರಿ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೆವಾಡದ ಪಿಎಸ್​ಐ ವೀರೇಶ್ ಆಲೂರು, ವಿಜಯಪುರ ಜಿಲ್ಲೆಯ ಆಲ್‌ಮೇಲ್ ತಾಲ್ಲೂಕಿನ ಬಳಗಾನೂರಿನ ಜಯಶ್ರೀ ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್‌ನಲ್ಲಿ ಇಬ್ಬರ ಪ್ರೇಮಾಂಕುರವಾಗಿತ್ತು. 2017ರಲ್ಲಿ ವೀರೇಶ್ ಪಿಎಸ್‌ಐ ಆಗಿ ಸೆಲೆಕ್ಟ್ ಆಗಿದ್ದರು. ಕೋಚಿಂಗ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿತ್ತು. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರು. ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಸಂಸಾರ ಮಾಡುತ್ತಿದ್ದರು ಎನ್ನಲಾಗಿದೆ.

ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಇಬ್ಬರು ಕೂಡ ಹಾರ ಬದಲಿಸಿಕೊಂಡಿದ್ದರು. ಲೇಡಿ ಕಾನ್ಸ್​ಟೇಬಲ್​ ಜಯಶ್ರೀ ಆರೋಗ್ಯ ಸಮಸ್ಯೆ ಮುಂದಿಟ್ಟು ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಪಿಎಸ್​ಐ ಆರೋಪಿಸಿದ್ದಾರೆ. ಮೊದಲಿಗೆ ಎಸ್‌ಡಿಎ ಹುದ್ದೆಗೆ ಆಯ್ಕೆಯಾಗಿದ್ದ ಜಯಶ್ರೀ ಕೊಪ್ಪಳದಲ್ಲಿ ಡ್ಯೂಟಿ ಮಾಡುತ್ತಿದ್ದರು. ಇತ್ತ ಪ್ರೊಬೇಷನರಿ ಪಿಎಸ್‌ಐ ಆಗಿ ವೀರೇಶ್ ಹೊಸಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸ ಮಾಡಿದ್ದೇವೆ ಎಂದು ಪಿಎಸ್​ಐ ವೀರೇಶ್​ ಹೇಳಿಕೊಂಡಿದ್ದರು.

ಮದುವೆಗೆ ಒಪ್ಪಿ ಬಳಿಕ ಕೈಕೊಟ್ಟ‌ ಲೇಡಿ ಪೇದೆ

ಬಳಿಕ ಎಸ್‌ಡಿಎ ಹುದ್ದೆ ಬಿಟ್ಟು ಕಾನ್ಸ್​ಟೇಬಲ್​ ಆಗಿದ್ದ ಜಯಶ್ರೀ, ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತ ವೀರೇಶ್ ಕೂಡ ರಾಯಚೂರಿನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ರಾಯಚೂರಿನಿಂದ ಬೆಂಗಳೂರಿಗೆ ವೀರೇಶ್‌ಗೆ ವರ್ಗಾವಣೆ ಆಗಿತ್ತು. ಸುಮಾರು 2 ವರ್ಷಗಳ ಕಾಲ ವೀರೇಶ್​ ರಾಯಚೂರಿಗೆ ಬಂದು ಹೋಗುತ್ತಿದ್ದರು. ಆದ್ರೆ, ಈ ಮೊದಲು ಮದುವೆಗೆ ಒಪ್ಪಿದ್ದ ಲೇಡಿ ಪೊಲೀಸ್ ಬಳಿಕ ಕೈಕೊಟ್ಟಿದ್ದರು. ಈ ವಿಚಾರವಾಗಿ ರಾಯಚೂರು ಎಸ್​ಪಿ, ಮತ್ತು ಡಿವೈಎಸ್​ಪಿ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಆದರೂ ಲೇಡಿ ಪೊಲೀಸ್​ ಮದುವೆಗೆ ಒಪ್ಪಿರಲಿಲ್ಲ.

ಮದುವೆಗೆ ಒಪ್ಪದ ಪ್ರಿಯತಮೆಯೇ ಬೇಕೆಂದು ಕುಳಿತ ಪಿಎಸ್‌ಐ

ಸುಮಾರು 8 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಪಿಎಸ್‌ಐ ವೀರೇಶ್‌ ಜಯಶ್ರೀ ಕುಟುಂಬಕ್ಕೆ ಬರೋಬ್ಬರಿ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಣ ಮಾತ್ರ ಅಲ್ಲದೇ ಊರಲ್ಲಿ ಜಯಶ್ರೀಗೆ ಮನೆ ಕಟ್ಟಿಸಿಕೊಟ್ಟಿದ್ದಾರಂತೆ, ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೇನೆ ಎಂದು ಹೇಳಿಕೊಂಡಿರುವ ಪಿಎಸ್​ಐ ನನ್ನನ್ನೇ ಮದುವೆ ಆಗುವಂತೆ ಪಟ್ಟು ಹಿಡಿದಿದ್ದರು. ಇದೀಗ ಉಲ್ಟಾ ಹೊಡೆದಿರುವ ಲೇಡಿ ಕಾನ್ಸ್​ಟೇಬಲ್​ ಜಯಶ್ರೀ ಪಿಎಸ್​ಐ ವಿರುದ್ಧ ದೂರು ನೀಡಿದ್ದಾರೆ.
#jbtvnews24x7

Comments are closed.

ನಾಳೆ ಮದುವೆ ಮಂಟಪ ಏರಬೇಕಿದ್ದವಳು ಮಸಣ ಸೇರಿದಳು!     |     ಮದುವೆ ನಿರಾಕರಿಸಿದ್ದಕ್ಕೆ #ಅಪ್ರಾಪ್ತೆಯ #ಸ್ತ*ನಗಳನ್ನೇ ಕತ್ತರಿಸಿದ ಕ್ರೂರಿ!     |     ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಜಯಶ್ರೀ ಕೊಟ್ಟ ಕೌಂಟರ್‌ ದೂರಿನಲ್ಲಿದ್ಯಾ ಅಸಲಿ ಸತ್ಯ?     |     ಭ್ರೂಣಲಿಂಗ ಪತ್ತೆ ಜಾಲ ಬಯಲು, ಮೂವರು ವೈದ್ಯರು ಅಂದರ್!     |     ಅಕ್ರಮ ಮರಳು ಸಾಗಾಣಿಕೆ ಮೇಲೆ ದಾಳಿ     |     ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ     |     ಫಾರಿನ್ ಸ್ಟೈಲ್’ಯಲ್ಲಿ ಪ್ರಪೋಸ್ ಮಾಡುತ್ತೀನಿ ಎಂದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ!     |     ಬಬಲೇಶ್ವರ ತಾಲೂಕು ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ     |     ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ ಮಾಡಿ ಹಿತನುಡಿಗಳುನ್ನು ಹೇಳಿದರು     |     ತೇರದಾಳ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಟ್ಟ ಆಮ್ ಆದ್ಮಿ ಪಕ್ಷ     |    

पत्रकार बंधु भारत के किसी भी क्षेत्र से जुड़ने के लिए सम्पर्क करें